ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಚಾನ್ಸ್ ಕೊಟ್ಟಿದ್ದಾರೆ. ಆದರೆ, ಅವರು ಇರಬೇಕೋ ಬೇಡ್ವೋ ಅನ್ನೊದನ್ನ ಸ್ಪರ್ಧಿಗಳೇ ಹೇಳಬೇಕು. ಇದರ ನಡುವೆ ಗಿಲ್ಲಿ ನಟನ ಲೆಕ್ಕಾಚಾರವೂ ಬೇರೆ ಇದೆ. ಅದರ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಒಂದಷ್ಟು ಸ್ಪರ್ಧಿಗಳು ನಾಮಿನೇಟ್ (Nominate) ಆಗಿದ್ದಾರೆ. ಆದರೆ, ಬಿಗ್ ಬಾಸ್ ಇವರಿಗೆ ಸೇಫ್ ಆಗಲು ಒಂದು ಚಾನ್ಸ್ ಕೊಟ್ಟಿದ್ದಾರೆ. ಆ ಚಾನ್ಸ್ ಅಷ್ಟು ಸುಲಭವಾಗಿಲ್ಲ. ಅಲ್ಲಿ ಗೆಸ್ ಮಾಡ್ಬೇಕು. ಆ ಗೆಸ್ಸಿಂಗ್ ಅಲ್ಲಿ ಗಿಲ್ಲಿ ನಟ (Gilli Nata) ಸಖತ್ ಆಗಿಯೇ ಯೋಚನೆ ಮಾಡಿದ್ದಾರೆ. ಉಪೇಂದ್ರ ರೀತಿನೇ ಕಣ್ಣು ತಿರುಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಗಿಲ್ಲಿಯನ್ನ ರಾಶಿಕಾ ಶೆಟ್ಟಿ (Rashika Shetty) ಕುತಂತ್ರಿ ಅಂತ ಹೇಳಿದ್ದಾರೆ. ಇಷ್ಟೆ ಅಲ್ಲ, ಯಾವ ಸ್ಪರ್ಧಿ ಬಗ್ಗೆ ಮತ್ಯಾರು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಕುತಂತ್ರಿ ಗಿಲ್ಲಿ ನಟ
ಗಿಲ್ಲಿ ನಟ ಇಲ್ಲಿ ದಿನಕೊಂದು ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾನೆ. ಆತ ಕುತಂತ್ರಿ ಆಗಿದ್ದಾನೆ. ಆತನನ್ನ ಮನೆಯಿಂದ ಕಳಿಸಬೇಕು ಅಂತ ರಾಶಿಕಾ ಶೆಟ್ಟಿ ಕೆಂಪು ಬಣ್ಣದ ಬೋರ್ಡ್ ಹಿಡಿದುಕೊಂಡಿದ್ದಾರೆ.

ಅಶ್ವಿನಿ ಗೌಡ ಕೂಡ ಕೆಂಪು ಬಣ್ಣದ ಬೋರ್ಡ್ ಹಿಡಿದಿದ್ದಾರೆ. ಆದರೆ, ಅದು ಗಿಲ್ಲಿ ಗೋಸ್ಕರ ಅಲ್ಲ. ಬದಲಾಗಿ, ಸ್ಪಂದನಾ ಮನೆಯಿಂದ ಹೋಗ್ಬೇಕು ಅಂತ ಹೇಳಲಿಕ್ಕೆ ಈ ಬೋರ್ಡ್ ಹಿಡಿದುಕೊಂಡಿದ್ದಾರೆ. ಯಾಕೆ ಅನ್ನೋ ಕಾರಣ ಕೂಡ ಕೊಟ್ಟಿದ್ದಾರೆ. ಸ್ಪಂದನಾ ಮನೆಯಿಂದ ಹೋಗ್ಬೇಕು. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಸ್ಪಂದನಾ ಏನೂ ಅಲ್ವೇ ಅಲ್ಲ ಅನ್ನೋದನ್ನೆ ಅಶ್ವಿನಿ ಗೌಡ ಇಲ್ಲಿ ಹೇಳಿಕೊಂಡಿದ್ದಾರೆ.
ನಾಮಿನೇಟ್ ಆದವರು ಏನ್ಮಾಡ್ಬೇಕು
ನಾಮಿನೇಟ್ ಆದವರು ಆ್ಯಕ್ಟಿವಿಟಿ ರೂಮ್ಗೆ ಹೋಗಿದ್ದಾರೆ. ಹಾಗಂತ ಎಲ್ಲರೂ ಒಟ್ಟಿಗೆ ಹೋಗಿಲ್ಲ. ಒಬ್ಬೊಬ್ಬರಾಗಿಯೇ ಹೋಗಿದ್ದಾರೆ. ಅಲ್ಲಿರೋ ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ಮನೆಯ ಒಳಗೆ ಇರೋರು ಕೊಡುವ ರಿಯಾಕ್ಷನ್ ಮೇಲೆ ಕುರ್ಚಿಯ ಬಣ್ಣ ಹಸಿರು ಮತ್ತು ಕೆಂಪು ಬಣ್ಣವಾಗಿಯೇ ಬದಲಾಗುತ್ತದೆ.
ಹಸಿರು ಬಣ್ಣಕ್ಕೆ ಆ ಚೇರ್ ಬದಲಾದರೆ, ಅವರು ನಾಮಿನೇಷನ್ನಿಂದ ಸೇಫ್ ಆದಂತೆ ಅಂತಲೇ ಲೆಕ್ಕ ನೋಡಿ. ಒಂದು ವೇಳೆ ಕೆಂಪು ಬಣ್ಣ ಬಂದ್ರೆ ಆಯಿತು. ಅವರ ನಾಮಿನೇಷನ್ ಮುಂದುವರೆಯುತ್ತದೆ. ಈ ರೀತಿಯ ಈ ಆಟದಲ್ಲಿ ಯಾರು ಸೇಫ್ ಆದರು. ಮತ್ಯಾರು ನಾಮಿನೇಷನ್ ಮುಂದುವರೆಯಿತು ಅನ್ನೋ ಕುತೂಹಲ ಇದ್ದೇ ಇದೆ.

ಇವರೂ ಗೆಸ್ ಮಾಡ್ಬೇಕು
ಹೌದು, ಆ್ಯಕ್ಟಿವಿಟಿ ರೂಮ್ ಅಲ್ಲಿರೋ ಗೆಸ್ ಮಾಡಬೇಕಿದೆ. ತಮ್ಮನ್ನ ಯಾರೆಲ್ಲ ನಾಮಿನೇಟ್ ಮಾಡಿದ್ದಾರೆ ಅನ್ನೋದನ್ನ ಗೆಸ್ ಮಾಡ್ಬೇಕಿದೆ. ಈ ಲೆಕ್ಕಾಚಾರದಲ್ಲಿಯೇ ಗಿಲ್ಲಿ ಕಣ್ಣುಗಳನ್ನ ತಿರುಗಿಸಿಯೇ ಯೋಚನೆ ಮಾಡಿದ್ದಾರೆ.
ಈ ಒಂದು ದೃಶ್ಯವೇ ಪ್ರೋಮೋದಲ್ಲಿಯೇ ಹೈಲೈಟ್ ಆಗಿದೆ. ಇನ್ನುಳಿದಂತೆ ಈ ವಾರದ ಮೊದಲ ದಿನದ ಸಂಚಿಕೆ ಇಂಟ್ರಸ್ಟಿಂಗ್ ಆಗಿಯೇ ಇದೆ ಅನಿಸುತ್ತದೆ.
ರಜತ್-ಚೈತ್ರಾ ಗೆಸ್ಟ್ ರಜತ್ ಮತ್ತು ಚೈತ್ರಾ ಮನೆ ಒಳಗೆ ಗೆಸ್ಟ್ ಆಗಿಯೇ ಹೋಗಿದ್ದರು. ಇವರು ವೈಲ್ಡ್ ಕಾರ್ಡ್ ಮೂಲಕ ಹೋಗಿರಲಿಲ್ಲ. ಈ ವಿಚಾರವನ್ನ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ಹಾಗೆ ಈ ವಾರ ಚೈತ್ರಾ ಹಾಗೂ ರಜತ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಈ ವಾರ ಯಾರು ಮನೆಗೆ ಹೋಗುತ್ತಾರೆ ಅನ್ನುವ ಕುತೂಹಲವೂ ಇದೆ. ಈ ಹಿಂದಿನ ವಾರ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ಗೆ ಹೋಗಿದ್ದರು. ಅಲ್ಲಿಂದ ಅವರು ಮನೆಗೂ ಬಂದಿದ್ದಾರೆ. ಎಂದಿನಂತೆ ತಮ್ಮ ಆಟ ಮುಂದುವರೆಸಿದ್ದಾರೆ.
ಸ್ಪಂದನಾ ಹೋಗ್ತಾರಾ
ಈ ವಾರ ಸ್ಪಂದನಾ ಮನೆಯಿಂದ ಹೋಗ್ತಾರಾ ಅನ್ನೋ ಪ್ರಶ್ನೆ ಇದೆ. ಕಾರಣ, ಬೇರೆಯವರ ಆಟವನ್ನ ಹೋಲಿಕೆ ಮಾಡಿದರೆ ಸ್ಪದನಾ ಡಲ್ ಅನಿಸುತ್ತಾರೆ. ಮಾಳು ನಿಪ್ಪನಾಳ್ ಕೂಡ ಏನೂ ಇಲ್ಲ ಅನಿಸುತ್ತಾರೆ. ಒಟ್ನಲ್ಲಿ ಈ ವಾರ ಯಾರು ಹೋಗ್ತಾರೆ ಅನ್ನುವ ಕುತೂಹಲ ಜಾಸ್ತಿನೆ ಇದೆ ಅಂತಲೂ ಹೇಳಬಹುದು.
ಈ ವಾರ ಸ್ಪಂದನಾ ಮನೆಯಿಂದ ಹೋಗ್ತಾರಾ ಅನ್ನೋ ಪ್ರಶ್ನೆ ಇದೆ. ಕಾರಣ, ಬೇರೆಯವರ ಆಟವನ್ನ ಹೋಲಿಕೆ ಮಾಡಿದರೆ ಸ್ಪದನಾ ಡಲ್ ಅನಿಸುತ್ತಾರೆ. ಮಾಳು ನಿಪ್ಪನಾಳ್ ಕೂಡ ಏನೂ ಇಲ್ಲ ಅನಿಸುತ್ತಾರೆ. ಒಟ್ನಲ್ಲಿ ಈ ವಾರ ಯಾರು ಹೋಗ್ತಾರೆ ಅನ್ನುವ ಕುತೂಹಲ ಜಾಸ್ತಿನೆ ಇದೆ ಅಂತಲೂ ಹೇಳಬಹುದು.

